ಬೆಂಡೆಕಾಯಿ ರಸಂ / Okra Rasam

(from Nandini’s recipe box)

Source: http://vanilohit.blogspot.in/search/label/%E0%B2%AE%E0%B3%87%E0%B2%B2%E0%B3%8B%E0%B2%97%E0%B2%B0

Categories: saaru/Rasam

Ingredients

  • ಬೆಂಡೆಕಾಯಿ 7 - 8
  • ಸಾರಿನ ಪುಡಿ 2 - 3 ಚಮಚ (ಖಾರಕ್ಕೆ ತಕ್ಕಂತೆ)
  • ಒಗ್ಗರಣೆಗೆ - ಎಣ್ಣೆ, ಕಡಲೆಬೇಳೆ, ಸಾಸಿವೆ, ಇಂಗು, ಚಿಟಿಕೆ ಅರಿಶಿನ, ಕರಿಬೇವು
  • ರುಚಿಗೆ ತಕ್ಕಷ್ಟು ಉಪ್ಪು
  • ಬೆಲ್ಲ ಅಥವಾ ಸಕ್ಕರೆ - 1 1/2 ಚಮಚ (ರುಚಿಗೆ ತಕ್ಕಷ್ಟು)
  • ಹುಣಸೆ ರಸ
  • ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಚಮಚ

Directions

  1. ಬೆಂಡೆಕಾಯಿಯನ್ನು ತೊಳೆದು ಬಟ್ಟೆಯಿಂದ ನೀರು ಹೋಗುವಂತೆ ಒರೆಸಿಕೊಂಡು, ಮಧ್ಯಮ ಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ.

  2. ಹುಣಸೆಹಣ್ಣನ್ನು 15 – 20 ನಿಮಿಷ ನೀರಿನಲ್ಲಿ ನೆನೆಸಿಟ್ಟು, ರಸ ತೆಗೆದುಕೊಳ್ಳಿ.

  3. ಬಾಣಲೆಯಲ್ಲಿ ಒಗ್ಗರಣೆಗಿಟ್ಟು 3 – 4 ಚಮಚ ಎಣ್ಣೆ ಕಾಯಿಸಿ ಕಡಲೆಬೇಳೆ, ಸಾಸಿವೆ, ಇಂಗು, ಅರಿಶಿನ, ಕರಿಬೇವು ಹಾಕಿ ಒಗ್ಗರಣೆ ಮಾಡಿ.

  4. ನಂತರ ಹೆಚ್ಚಿಟ್ಟ ಬೆಂಡೆಕಾಯಿ ಹೋಳುಗಳನ್ನು ಸೇರಿಸಿ 2 – 3 ನಿಮಿಷ ಕೈಯಾಡಿಸಿ.

  5. ಸಾರಿನ ಪುಡಿಯನ್ನು ನೀರಿನಲ್ಲಿ ಕದಡಿ, ಬೆಂಡೆಕಾಯಿ ಮಿಶ್ರಣಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಮತ್ತು ಹುಣಸೆರಸ ಸೇರಿಸಿ ಕೈಯಾಡಿಸಿ.

  6. ರಸಂ ಮಿಶ್ರಣಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, 3 ಲೋಟದಷ್ಟು ನೀರು ಸೇರಿಸಿ ನಾಲೈದು ನಿಮಿಷ ಕುದಿಸಿ ಇಳಿಸಿ. ಬಿಸಿ ಅನ್ನದೊಡನೆ ಸರ್ವ್ ಮಾಡಿ.

  7. ಟಿಪ್ಸ್:

  8. ರಸಂ ಮಿಶ್ರಣ ತುಂಬ ತೆಳ್ಳಗೆನಿಸಿದರೆ ಒಂದು ಚಮಚದಷ್ಟು ಅಕ್ಕಿಹಿಟ್ಟನ್ನು ನೀರಿನಲ್ಲಿ ಕದಡಿ, ರಸಂ ಗೆ ಸೇರಿಸಿ ಕುದಿಸಿ. ರಸಂ ಅಥವಾ ಯಾವುದೇ ಸಾಂಬಾರ್ ಗೆ ಖಾರ ಹೆಚ್ಚಾಗಿದ್ದರೂ ಅಕ್ಕಿಹಿಟ್ಟನ್ನು ಕದಡಿ ಸೇರಿಸಿದರೆ ಸರಿಹೋಗುತ್ತದೆ.

Email to a friend | Print this recipe | Back